ಇತ್ತೀಚೆಗಿನ ಸುದ್ದಿ

ಸಂಸ್ಥೆ

ಮುಖ್ಯ ವಿದ್ಯುತ್ ಪರಿವೀಕ್ಷಕರು, ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಅದರ ಮುಖ್ಯ ಕಚೇರಿಯು, 2ನೇ ಮಹಡಿ, ನಿರ್ಮಾಣ ಭವನ, ಡಾ|| ರಾಜ್‍ಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ.

ಮುಖ್ಯ ವಿದ್ಯುತ್ ಪರಿವೀಕ್ಷಕರು ರಾಜ್ಯದಾದ್ಯಂತ ಪರಿವೀಕ್ಷಣಾ ವ್ಯಾಪ್ತಿ ಹೊಂದಿದ್ದು, ಆಡಳಿತ ಮತ್ತು ಕಾಯಿದೆ ಹಾಗೂ ನಿಯಮಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಖ್ಯ ವಿದ್ಯುತ್ ಪರಿವೀಕ್ಷಕರಿಗೆ, ಅಪರ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ವಿದ್ಯುತ್ ಪರಿವೀಕ್ಷಕರು, ಉಪ ವಿದ್ಯುತ್ ಪರಿವೀಕ್ಷಕರು, ಸಹಾಯಕ ವಿದ್ಯುತ್ ಪರಿವೀಕ್ಷಕರು, ಲೆಕ್ಕಾಧಿಕಾರಿ, ವ್ಯವಸ್ಥಾಪಕರು, ಅಧೀಕ್ಷಕರು ಮತ್ತು ಇತರ ಸಿಬ್ಬಂದಿಗಳು ಸಹಕರಿಸುತ್ತಿರುತ್ತಾರೆ.

ವಿದ್ಯುತ್ ಪರಿವೀಕ್ಷಣಾ ಇಲಾಖೆಗೆ ಮಂಜೂರಾದ ಕಾರ್ಯನಿರತ ಸಿಬ್ಬಂದಿ ಮತ್ತು ರಿಕ್ತ ಸ್ಥಾನಗಳ ವಿವರಗಳನ್ನು ಕೆಳಗೆ ನಮೂದಿಸಲಾಗಿದೆ.

31-03-2016 ರ ಅಂತ್ಯಕ್ಕೆ

ಕ್ರಮ ಸಂಖ್ಯೆ ಹುದ್ದೆಗಳ ಹೆಸರು ಮಂಜೂರಾದ ಹುದ್ದೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು ರಿಕ್ತಸ್ಥಾನಗಳು
1 ಮುಖ್ಯ ವಿದ್ಯುತ್ ಪರಿವೀಕ್ಷಕರು 01 01 --
2 ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಕರು 07 06 01
3 ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು 15 14 01
4 ವಿದ್ಯುತ್ ಪರಿವೀಕ್ಷಕರು 25 25 --
5 ಉಪ ವಿದ್ಯುತ್ ಪರಿವೀಕ್ಷಕರು 41 39 02
6 ಸಹಾಯಕ ವಿದ್ಯುತ್ ಪರಿವೀಕ್ಷಕರು 106 65 41
7 ಹಿರಿಯ ಲೆಕ್ಕಾಧಿಕಾರಿ 01 -- 01
8 ಲೆಕ್ಕಾಧಿಕಾರಿ 07 02 05
9 ಲೀಗಲ್ ಆಫೀಸರ್ 01 00 01
10 ವ್ಯವಸ್ಥಾಪಕರು 08 08 --
11 ಅಧೀಕ್ಷಕರು 21 05 16
12 ಪ್ರಥಮ ದರ್ಜೆ ಸಹಾಯಕರು 51 29 22
13 ಶೀಘ್ರಲಿಪಿಗಾರರು 08 02 06
14 ದ್ವಿತೀಯ ದರ್ಜೆ ಸಹಾಯಕರು 61 33 28
15 ಬೆರಳಚ್ಚುಗಾರರು 03 01 02
16 ಧಫೇದಾರರು 02 02 --
17 ಹಿರಿಯ ವಾಹನ ಚಲಕರು 02 02 --
18 ವಾಹನ ಚಾಲಕರು 09 02 07
19 ಗ್ರೂಪ್ ‘ಡಿ’ 46 13 33
20 ಕಂಪ್ಯೂಟರ್ ಆಪರೇಟರ್ (ಬಾಹ್ಯ ಮೂಲಕ) 14 09 05
21 ಗ್ರೂಪ್ ‘ಡಿ’ (ಬಾಹ್ಯ ಮೂಲಕ) 23 13 10
ಒಟ್ಟು 452 271 181