Menu
ಶಕ್ತಿ ಸಂರಕ್ಷಣೆ ನಿರ್ಮಾಣ ನಿಯಮ

ಕೋಡ್ ಕಟ್ಟಡಗಳು ಅಥವಾ ಸಂಕೀರ್ಣಗಳು 1000 ಮೀ ಅಥವಾ ಹೆಚ್ಚು ಪ್ರದೇಶ ಹೊಂದಿರುವಲ್ಲಿಗೆ ಮಾತ್ರ ನಿಯಮಾಧೀನದಂತೆ ಅನ್ವಯವಾಗುತ್ತದೆ. ಕೋಡ್ ರಾಜ್ಯದ ಸ್ವಯಂ ಸೇವದ ಅಡಿಯಲ್ಲಿ ಪ್ರಸ್ತುತವಾಗಿದೆ, ಈ ಕೋಡ್ ಕರ್ನಾಟಕ ಸರ್ಕಾರದ ಸೆಕ್ಷನ್ 14 ಅಥವಾ ಷರತ್ತು(ಎ)ರ ಅಡಿಯಲ್ಲಿ ಅದಿಕೃತ ಗೆಜೆಟ್ ನ ಸೂಚನೆ (ಪಿ) ವಿಭಾಗ 15 ಶಕ್ತಿ ಸಂರಕ್ಷಣಾ ಕಾಯಿದೆಯ 2001 (52 of 2001) ರಂತೆ ಜಾರಿಗೊಂಡಿರುತ್ತದೆ.

ಈ ಕೋಡ್ ಕರ್ನಾಟಕ ರಾಜ್ಯದ ಪ್ರಾದೇಶಿಕ ಮತ್ತು ಸ್ಥಳೀಯ ಹವಾಮಾನ ತಕ್ಕಂತೆ ರೂಪುಗೊಳ್ಳುವಂತೆ ಮಾಡಲಾಗುತ್ತಿದೆ. ಕೋಡ್ ಅಂಗೀಕಾರದಲ್ಲಿ ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರ್ಗಳು ಕೋಡ್ ಅನುಸರಿಸಲು ಮತ್ತು ಸೈಟ್ ಹವಾಮಾನ ಪ್ರಕಾರ ತಮ್ಮ ಯೋಜನೆಗಳ ನಿರ್ದಿಷ್ಟ ಅವಶ್ಯಕತೆಗಳನ್ನು ಮುಟ್ಟುವ ಸಾಮರ್ಥ್ಯಗಳ ಅವಕಾಶವನ್ನು ಆದಷ್ಟು ಸುಲಭವಾಗಿ ಮಾಡಲಾಗುವುದು ಅನುಕೂಲಕರವಾಗಿದೆ.

ಈ ಕೋಡ್ ನ ಒಟ್ಟಾರೆ ಉದ್ದೇಶ ವಾಸ್ತುಶಿಲ್ಪಿಗಳು & ಎಂಜಿನಿಯರುಗಳು ಹೊಸ ಕಟ್ಟಡಗಳನ್ನು ತಮ್ಮ ವಿನ್ಯಾಸಗಳಲ್ಲಿ ನಿರ್ಮಿಸಲು ಕಟ್ಟಡಗಳಿಗೆ ಇಂಧನ ಸಂರಕ್ಷಣೆ ತತ್ವಗಳು ಮತ್ತು ತಂತ್ರಜ್ಞಾನದ ಅರಿವು ಮೂಡಿಸಲು ತಾಂತ್ರಿಕ ವಿವರಗಳನ್ನು ಒದಗಿಸುವುದು.

ಕೋಡ್ ಅನ್ವಯಿಸುವ ನಿಬಂದನೆಗಳು:

  • ಈ ನಿಯಮವು ಶೇಖರಣಾ ಸ್ಥಳಗಳು ಅಥವಾ ಗೋದಾಮುಗಳ ವ್ಯಾಪ್ತಿಗೆ ಅನ್ವಹಿಸುವುದಿಲ್ಲ.
  • ಯಾಂತ್ರಿಕ ವ್ಯವಸ್ಥೆಗಳು ಮತ್ತು ಉಪಕರಣಗಳು, ಬಿಸಿ ವಾತಾವರಣ, ಮತ್ತು ಹವಾ ನಿಯಂತ್ರಣವನ್ನು ಸೇರಿದಂತೆ ಒಳಗೊಂಡಿರುತ್ತದೆ(ಹೆಚ್.ವ.ಎ.ಸಿ)
  • ನೀರನ್ನು ಬಿಸಿ ಮಾಡಲು ಸಹಾಯ
  • ಆಂತರಿಕ ಮತ್ತು ಬಾಹ್ಯ ಬೆಳಕಿನ ವ್ಯವಸ್ಥೆ
  • ವಿದ್ಯುತ್ ಶಕ್ತಿ ಮತ್ತು ಮೋಟಾರ್

ಕೋಡ್ ಅನ್ವಹಿಸದ ನಿಬಂದನೆಗಳು:

  • ವಿದ್ಯುತ್ ಶಕ್ತಿ ಅಥವಾ ಇಂಧನ ಶಕ್ತಿಯನ್ನು ಬಳಸದ ಕಟ್ಟಡಗಳಿಗೆ ಅನ್ವಹಿಸುವುದಿಲ್ಲ.
  • ಈ ನಿಯಮವು ನಿರ್ಮಾಣ ಅಂತದಲ್ಲಿ ಬಳಸುತ್ತಿದ್ದರೆ ಅನ್ವಹಿಸುವುದಿಲ್ಲ.