ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯಿಂದಾಗಿ, ಇಂಧನ ದಹನದ ಪ್ರತಿಯಾಗಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ವಿದ್ಯುತ್ ಶಕ್ತಿಯ ಸಮರ್ಥ ಬಳಕೆ ಮತ್ತು ಅದರ ಸಂರಕ್ಷಣೆಯ ಪ್ರಾಮುಖ್ಯತೆ ಇದೆ. ಅಂದಾಜು 25000 MW ನಷ್ಟು ವಿದ್ಯುತ್ ಶಕ್ತಿಯನ್ನು ಅಂತಿಮ ಬಳಕೆ ಸಾಮರ್ಥ್ಯ ಮತ್ತು ಅದರ ನಿರ್ವಹಣೆಯ ಕ್ರಮಗಳನ್ನು ಆಳವಡಿಸುವುದರಿಂದ ಉಳಿಸಬಹುದು. ವಿದ್ಯುತ್ ಶಕ್ತಿ ಮತ್ತು ಅದರ ನಿರ್ವಹಣೆಯ ಸಮರ್ಥ ಬಳಕೆಯು, ಒಂದು ಘಟಕದ ಶಕ್ತಿಯನ್ನು ಸಂರಕ್ಷಿಸುವುದರಿಂದ 2.5 ರಿಂದ 3 ಪಟ್ಟು ಸಾಮರ್ಥ್ಯ ಸೃಷ್ಟಿಯನ್ನು ಕಡಿಮೆ ಮಾಡಬಹುದು.
ಇದಲ್ಲದೆ ವಿದ್ಯುತ್ ಶಕ್ತಿಯ ಸಮರ್ಥ ಉಳಿತಾಯ ಕಡಿಮೆಯೆಂದರೆ 1/5 ರಷ್ಟು ಸಾಮರ್ಥ್ಯ ಶಕ್ತಿ ವೆಚ್ಚದಲ್ಲಿ ಸಾಧಿಸಬಹುದು, ವಿದ್ಯುತ್ ಶಕ್ತಿ ಕ್ಷಮತೆಯಿಂದ ಇಂಧನ ಬಳಕೆಯನ್ನು ಹೊರತುಪಡಿಸಿ ವಿದ್ಯುತ್ ಅವಶ್ಯಕತೆಗಳು ಪೂರೈಸುವುದರಿಂದ ಸಾಧಿಸಬಹುದು.
ಪಳೆಯುಳಿಕೆ ಇಂದನಗಳಿಗೆ ರಚಿತವಾದ ವಿದ್ಯುಚ್ಛಕ್ತಿ ಒಂದು ಮನೆಗೆ, ಎರಡು ಕಾರುಗಳಿಂದ ಹೊರಬರುವ ಸರಾಸರಿ ಇಂಗಾಲದ ಡೈಆಕ್ಸೈಡ್ ನಷ್ಟು ಹೊರಬರುತ್ತದೆ. ಇದನ್ನು ಇಂಧನ ದಕ್ಷತೆಯ ಕ್ರಮಗಳನ್ನು ಬಳಸಿಕೊಂಡು 10%-50% ರಷ್ಟು ಕಡಿಮೆ ವಿದ್ಯುತ್ ಶಕ್ತಿ ಬಿಲ್ಲನ್ನು ಉಳಿಸಬಹುದು ಹಾಗೂ ಅದೇ ಸಮಯದಲ್ಲಿ ವಾಯುಮಾಲಿನ್ಯವನ್ನು ತಗ್ಗಿಸಲು ಸಹಾಯ ಮಾಡಬಹುದು.
ಇಂಧನ ಉಳಿತಾಯ ಸಲಹೆಗಳು:
- ನೀವು ರೋಮಿನಿಂದ ಹೊರಡುವಾಗ ಎಲ್ಲಾ ಲೈಟ್ ಗಳ ಸ್ವಿಚ್ ಆಫ್ ಮಾಡಿ, ಹೀಗೆ ಮಾಡುವುದರಿಂದ ಗಮನಾರ್ಹವಾಗಿ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು.
- ನೀವು ಬಳಸಿದ ನಂತರ ಟೆಲಿವಿಷನ್, ರೆಡಿಯೊ ಅಥವಾ ಕಂಪ್ಯೂಟರ್ ಆಫ್ ಮಾಡಿ.
- ಸಾಮನ್ಯ ಬಲ್ಬಗಳ ಬದಲಿಗೆ ಪ್ಲೋರೆಸೆಂಟ್ ಬಲ್ಬ್ ಗಳನ್ನು ಬಳಸಿ, ಈ ಬಲ್ಬುಗಳು ಕಡಿಮೆ ಶಕ್ತಿ ಬಳಸಿ ಹೆಚ್ಚು ಬೆಳಕು ನೀಡುತ್ತವೆ, ಈ ಬಲ್ಬುಗಳು ಸಾಮಾನ್ಯ ಬಲ್ಬಿಗಿಂತ 10 ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ.
- ಬೇಸಿಗೆ ಸಮಯದಲ್ಲಿ, ಏರ್ ಕಂಡಿಷನರ್ ನಲ್ಲಿ 24 ಡಿಗ್ರಿಗಿಂತ ಹೆಚ್ಚು ಇಡಿ ಮತ್ತು ಸೀಲಿಂಗ್ ಫ್ಯಾನ್ ಬಳಸಿ, ಅಲ್ಲದೆ ನೀವು ಸ್ವಲ್ಪ ಸಮಯದ ವರೆಗಾದರೂ A/C ಆಫ್ ಮಾಡಿ ಹೊರಗೆಬನ್ನಿ.
- ಬೇಸಿಗೆ ಕಾಲದಲ್ಲಿ ದಕ್ಷಿಣ ದಿಕ್ಕಿನ ಕಿಟಕಿಗಳನ್ನು ತೆರೆದಿಡುವುದರಿಂದ ಸೂರ್ಯನ ಕಿರಣಗಳು ಮನೆ ಒಳಬಂದು ಗಾಳಿ ಬೆಳಕಿನಿಂದ ಕೂಡಿರುತ್ತದೆ, ಮತ್ತೆ ರಾತ್ರಿ ಚಳಿಯಿಂದ ಕೂಡಿದ ಹಿತಕರವಾದ ವಾತವರಣವಿರುತ್ತದೆ, ಚಳಿಗಾಲದಲ್ಲಿ ಕಿಟಕಿಗಳಿಗೆ ಹೊದಿಕೆಗಳನ್ನು ಮುಚ್ಚಿ ಚಳಿಗಾಳಿಯನ್ನು ತಡೆಗಟ್ಟುವಂತೆ ಇರಿಸಿಕೊಳ್ಳಿ.
- ನಿಮ್ಮ ವಾಟರ್ ಹೀಟರ್ ಗೆ ಕಡಿಮೆ ಸಾಮರ್ಥ್ಯ ಥರ್ಮೋಸ್ಟಾಟ್ ಬಳಸಿ; ಕೆಲವೊಮ್ಮೆ ಉತ್ಪಾದಕರು ಹೆಚ್ಚು ಟೆಂಪರೇಚರ್ ಸೆಟ್ಟಿಂಗ್ ಗಳನ್ನು ಆಳವಡಿಸಿರುತ್ತಾರೆ, ಆದರೆ 115°F ಸೆಟ್ಟಿಂಗ್ ಅತ್ಯಂತ \ ಆರಾಮದಾಯಕವಾಗಿ ಬಿಸಿ ನೀರನ್ನು ಒದಗಿಸುತ್ತದೆ.
- ಅಡಿಗೆ ಮನೆ, ಸ್ನಾನದ ಮನೆಯಲ್ಲಿ ವೆಂಟಿಲೇಟಿಂಗ್ ಫ್ಯಾನ್ ಬಳಸಿ; ಇದನ್ನು ಬಳಸುವುದರಿಂದ ಕೇವಲ 1 ಗಂಟೆಯಲ್ಲಿ ಮನೆ ತುಂಬ ತಂಪಾದ ಗಾಳಿಯಿಂದ ತುಂಬಿರುತ್ತದೆ. ಆವಾಗ ನೀವು ಪ್ಯಾನ್ ಆಫ್ ಮಾಡಿ ಇಂದನ ಶಕ್ತಿ ಉಳಿಸಿ.
- ಕಿಟಕಿಗಳನ್ನು ಹೆಚ್ಚು ತೆಗೆದಿಡುವುದರಿಂದ ನೈಸರ್ಗಿಕ ಬೆಳಕು ಗರಿಷ್ಟಗೊಂಡು ಇಂದನ ಶಕ್ತಿಯ ಬಳಕೆ ಕಡಿಮೆಯಾಗುತ್ತದೆ.
ಭಾರತದಲ್ಲಿ ಇಂದನ ಶಕ್ತಿಸಂರಕ್ಷಣೆಗೆ, ಶಕ್ತಿ ಸಂರಕ್ಷಣೆ ಕಾಯಿದೆ 2001 ಎಂದ ಸೂತ್ರವನ್ನು ಹೊಂದಿದೆ.
ಕರ್ನಾಟಕ ರಿನಿವಬಲ್ ಎನೆರ್ಜಿ ಡೆವಲಪ್ಮೆಂಟ್ ಲಿಮಿಟೆಡ್ (KREDL) ಸಂಸ್ಥೆಯನ್ನು ಶಕ್ತಿ ಸಂರಕ್ಷಣೆ ಕಾಯಿದೆ 2001ನ್ನು ಜಾರಿಗೊಳಿಸಲು, ಕರ್ನಾಟಕ ಸರ್ಕಾರ ನೇಮಿಸಿದೆ.