ಕಾರ್ಯಗಳು
ಇಲಾಖಾ ಕರ್ತವ್ಯಗಳು:
ವಿವಿಧ ಕೇಂದ್ರ ಹಾಗೂ ರಾಜ್ಯಗಳ ಕಾಯಿದೆ ಮತ್ತು ನಿಯಮಗಳ ಪ್ರಕಾರ ಇಲಾಖೆಯು ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುತ್ತದೆ.
- ಕ.ವಿ.ಪ್ರ.ನಿ.ನಿ, ಸ್ವತಂತ್ರ ವಿದ್ಯುತ್ ಉತ್ಪಾದಕರ (ಹೈಡ್ರೋ, ಥರ್ಮಲ್ ವಿಂಡ್, ಡೀಸೆಲ್, ಕೋ-ಜನರೇಷನ್, ಬಯೋ-ಮಾಸ್, ಇತರೆ) ಸರಬರಾಜುದಾರರ / ಲೈಸೆನ್ಸ್‍ದಾರರ ವಿತರಣಾ ಕೇಂದ್ರ ಹಾಗೂ ಅದಕ್ಕೆ ಸಂಬಂಧಿಸಿದ ಮಾರ್ಗಗಳು, ವಿದ್ಯುತ್ ಸರಬರಾಜುದಾರ ಕಂಪನಿಗಳ ವಿತರಣಾ ಕೇಂದ್ರ ಹಾಗೂ ವಿದ್ಯುತ್ ಮಾರ್ಗ, (ಇಹೆಚ್‍ಟಿ, ಹೆಚ್‍ಟಿ), ವಿದ್ಯುತ್ ಜನಕ (ಸಿ.ಜಿ./ಡಿ.ಜಿ/ಟಿ.ಜಿ), 15 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದ ಬಹುಮಹಡಿ ಕಟ್ಟಡ, ಲಿಫ್ಟ್ ಮತ್ತು ಎಸ್ಕಲೇಟರ್, ಮತ್ತು ಸಿನಿಮಾ ವಿದ್ಯುತ್ ಸ್ಥಾವರಗಳ ರೇಖಾ ಚಿತ್ರಗಳ ಪರಿಶೀಲನೆ ಹಾಗೂ ಅನುಮೋದನೆ ಕೊಡುವುದು.
- ಮೇಲ್ಕಂಡ ವಿದ್ಯುತ್ ಸ್ಥಾವರಗಳ ಹಾಗೂ ಕ್ಷ-ಕಿರಣ ನಿಯಾನ್‍ಸೈನ್ ಮತ್ತು ತಾತ್ಕಾಲಿಕ ವಿದ್ಯುತ್ ಸ್ಥಾವರಗಳ ಪ್ರಾಥಮಿಕ ಪರಿವೀಕ್ಷಣೆ ಮಾಡಿ ಸುರಕ್ಷತಾ ನಿಯಮಗಳಿಗೆ ಒಳಪಟ್ಟಿದ್ದಲ್ಲಿ ಚಾಲನೆಗೊಳಿಸಲು ಅನುಮೋದನೆ ಕೊಡುವುದು ಹಾಗೂ ಕಾಲಕಾಲಕ್ಕೆ ಮೇಲ್ಕಂಡ ವಿದ್ಯುತ್ ಸ್ಥಾವರಗಳ ಮತ್ತು ಮಧ್ಯಮ ಒತ್ತಡ ವಿದ್ಯುತ್ ಸ್ಥಾವರಗಳ ನಿಯತಕಾಲಿಕ ಪರಿವೀಕ್ಷಣೆ ನಡೆಸುವುದು.
- ವಿದ್ಯುತ್ ಅಪಘಾತಗಳ ತನಿಖೆ ನಡೆಸಿ, ಅಪಘಾತ ತಡೆಯುವ ಸಲಹೆಗಳೊಂದಿಗೆ ಸರ್ಕಾರಕ್ಕೆ ವರದಿ ಮಾಡುವುದು. ವಿದ್ಯುತ್ ಸರಬರಾಜುದಾರರು ಮತ್ತು ಲೈಸೆನ್ಸಿಗಳೊಂದಿಗೆ ವಿದ್ಯುತ್ ಅಪಘಾತಗಳನ್ನು ತಡೆಯುವ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಸುವುದು.
- ವಿದ್ಯುತ್ ಸರಬರಾಜುದಾರರು/ಲೈಸೆನ್ಸಿಗಳಿಂದ ವಸೂಲಾದ ತೆರಿಗೆ ಮತ್ತು ಸ್ವವಿದ್ಯುತ್ ಮೇಲೆ ವಸೂಲಾದ ವಿದ್ಯುತ್ ತೆರಿಗೆಗಳ ಲೆಕ್ಕಾಚಾರ ಮತ್ತು ವಸೂಲಿ ಬಗ್ಗೆ ಕ್ರಮ ಕೈಗೊಳ್ಳುವುದು.
- ವಿದ್ಯುತ್ ಗುತ್ತಿಗೆದಾರರಿಗೆ, ಸೂಪರ್ ವೈಸರ್‍ಗಳಿಗೆ, ವೈರ್‍ಮನ್‍ಗಳಿಗೆ ಮತ್ತು ವಿಶೇಷ ವೈರ್‍ಮನ್ ಪರ್ಮಿಟ್‍ಗಳಿಗೆ ಹೊಸ ಲೈಸೆನ್ಸ ನೀಡುವುದು ಮತ್ತು ನವೀಕರಣಗೊಳಿಸುವುದು. ಔದ್ಯಮಿಕ ಮತ್ತು ಗಣಿ ಪರ್ಯವೇಕ್ಷಕರ ಮತ್ತು ತಂತಿಕರ್ಮಿಗಳ ಪರೀಕ್ಷೆ ನಡೆಸುವುದು.
- ಸಿನಿಮಾ ಆಪರೇಟರ್‍ಗಳಿಗೆ ಪರ್ಮಿಟ್ ನೀಡಲು ಪರೀಕ್ಷೆ ನಡೆಸುವುದು ಮತ್ತು ಪರ್ಮಿಟ್ ನೀಡುವುದು.
- ವಿದ್ಯುತ್ ಗುತ್ತಿಗೆದಾರರ ಪರವಾನಗಿ, ಮೇಲ್ವಿಚಾರಕರ(ಸುಪರ್ ವೈಸರ್) ಪರವಾನಗಿ, ವಿಶೇಷ ವೈರ್ ಮನ್ ಪರವಾನಗಿ, ವೈರ್ ಮನ್ ಪರವಾನಗಿಗಳನ್ನು ಮತ್ತು ಅದರ ನವೀಕರಣವನ್ನು ಮಾಡಲಾಗುತ್ತದೆ.
- ವಿದ್ಯುತ್ ಮೇಲ್ವಿಚಾರಕರ(ಸುಪರ್ ವೈಸರ್) ಮತ್ತು ವಿದ್ಯುತ್ ವೈರಮನ್ ಗಳ ಪರೀಕ್ಷೆಗಳು(ಕೈಗಾರಿಕಾ ಮತ್ತು ಗಣಿಗಾರಿಕಾ) ನಡೆಯುತ್ತವೆ ಹಾಗೂ ಪ್ರಮಾಣಪತ್ರ ಪರವಾನಗಿಯನ್ನು ವಿತರಣೆ ಮಾಡಲಾಗುತ್ತದೆ.
- ಸಿನಿಮಾ ಆಯೋಜಕರ ಪ್ರಮಾಣ ಪತ್ರಗಳಿಗೆ ಪರೀಕ್ಷೆಗಳನ್ನು ನಡೆಸುತ್ತದೆ.