ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಗಳ ನಿರ್ಮಾಣ ಹಾಗು ನಿರ್ವಹಣೆಗೆ ಒಳಗೊಂಡಿರುವ ವ್ಯಕ್ತಿಗಳ ಕಾರ್ಯಗಳನ್ನು ನಿಯಂತ್ರಿಸಲು, ಕರ್ನಾಟಕ ಸರ್ಕಾರದ ಲಿಫ್ಟ್ ಕಾಯಿದೆ
1974 ಇದನ್ನು ರದ್ದು ಪಡಿಸಿ, ಹೊಸದಾಗಿ ಸಮಗ್ರ ಕಾನೂನುಗಳನ್ನು ಒಳಗೊಂಡಿರುವ ಕರ್ನಾಟಕ ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಕಾಯಿದೆ 2012(2013 ರ ಕರ್ನಾಟಕ ಕಾಯಿದೆ ನಂ 9)
ಇದನ್ನು ಜಾರಿಗೆ ತಂದಿದೆ.
ಕರ್ನಾಟಕ ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಗಳ ನೇಮಕಾತಿಯು ಕಾಯಿದೆ 2012(2013 ರ ಕರ್ನಾಟಕ ಕಾಯಿದೆ ನಂ 9) ಮತ್ತು ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್
ಗಳ ನಿಯಮಗಳನ್ನು 2015ರಲ್ಲಿ ಸೂಚಿಸಲಾಗಿದೆ ಹಾಗೂ ಇದರ ಅದಿಸೂಚನೆ ನಂ: ಇ.ಎನ್.36, ಇ.ಬಿ.ಎಸ್ 2013, ದಿನಾಂಕ: 20.01.2015 ಮತ್ತು ಇ.ಎನ್.36, ಇ.ಬಿ.ಎಸ್ 2015, ದಿನಾಂಕ: 20-01-2015
ಮತ್ತು ಅದನ್ನು ಅಸಮಾನ್ಯ ಗೆಜೆಟ್ ಭಾಗ IV-A, ನಂ 72, ದಿನಾಂಕ: 20-01-2015 ಮತ್ತು ಅಸಮಾನ್ಯ ಗೆಜೆಟ್ ಭಾಗ IV-A, ನಂ 74, ದಿನಾಂಕ: 20-01-2015ರಲ್ಲಿ ಪ್ರಕಟಿಸಲಾಗಿದೆ.
ಕರ್ನಾಟಕ ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ 2012 ಅದಿಸೂಚನೆ ನಂ ಇ.ಎನ್ 36, ಇ.ಬಿ.ಎಸ್ 2013, ಬೆಂಗಳೂರು, ದಿನಾಂಕ: 18.03.2015 ರ ಅಡಿಯಲ್ಲಿ ಉಪವಿಭಾಗ(2) ಸೆಕ್ಷನ್ 13
ಇದರ ಪ್ರದಾನ ಅಧಿಕಾರವನ್ನು ನಿರ್ವಹಿಸಲು ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಗಳ ಜವಾಬ್ದಾರಿಯನ್ನು ಮುಖ್ಯ ವಿದ್ಯುತ್ ಪರಿವೀಕ್ಷಕರುಯ ನೇಮಕಾತಿಯಾಗಿದೆ ಹಾಗೂ ಕರ್ನಾಟಕ ರಾಜ್ಯದ
ವ್ಯಾಪ್ತಿಯ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ, ಹಾಗೂ ಇತರೆ ವಿದ್ಯುತ್ ಪರೀಕ್ಷಾದಿಕಾರಿಗಳ ನೇಮಕಾತಿಯು ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಗಳ ಪರಿವೀಕ್ಷಣೆಯ ಕಾರ್ಯಗಳನ್ನು
ನಿರ್ವಹಿಸಲು ಮೇಲೆ ಹೇಳಿರುವ ಕಾಯಿದೆಯ ಅಡಿಯಲ್ಲಿ ಆಗಿರುತ್ತದೆ.
ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಗಳ ನಿರ್ಮಾಣ ಮತ್ತು ನಿರ್ವಹಣೆನ್ನು, ಲಿಫ್ಟ್ ಉತ್ಪಾದಕರು ಹಾಗೂ ಅದಿಕೃತ ಲಿಫ್ಟ್ ಎಜೆನ್ಸಿಯವರು ಮಾತ್ರ ಕೈಗೊಳ್ಳಬೇಕು. ಪ್ರತಿ ಲಿಫ್ಟ್ ಅಥವಾ
ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ಗಳ ನಿರ್ಮಾಣ/ಅನುಸ್ಥಾಪನೆ ಮತ್ತು ನಿರ್ವಹಣೆಯನ್ನು ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್, ವಿದ್ಯುಚ್ಛಕ್ತಿ ಕಾಯಿದೆ 2003(ಕೇಂದ್ರ ಅಧಿನಿಯಮ 2003 ರ 36)
ಇದರ ಸಂಬಂಧಿತ ಮಾನಕಗಳನ್ನು ಬಳಸಲಾಗುತ್ತದೆ ಹಾಗೂ ಯಾವುದದೇ ನಿಯಮಗಳು ಮತ್ತು ರೆಗ್ಯುಲೇಷನ್, ನಾಷನಲ್ ಎಲೆಕ್ಟ್ರಿಕಲ್ ಕೋಡ್, ನ್ಯಾಷನಲ್ ಬಿಲ್ಡಿಂಗ್ ಕೋಡ್ ಅಥವಾ ಅಂತರಾಷ್ಟ್ರೀಯ ವಿದ್ಯುತ್
ಆಯೋಗದ ವಿಶೇಷಣಗಳು ಇದರ ಅಡಿಯಲ್ಲಿ ನಿರ್ವಹಿಸಲಾಗುತ್ತದೆ.
ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಗಳಿಗೆ ಉಪಯೋಗಿಸುವ ಎಲ್ಲಾ ರೀತಿಯ ಉಪಕರಣಗಳು ಸಾಕಷ್ಟು ರೇಟಿಂಗ್ ಮತ್ತು ಸಾಕಷ್ಟು ಯಾಂತ್ರಿಕ ಶಕ್ತಿಯನ್ನು ಒಳಗೊಂಡು ಸುರಕ್ಷತೆಯ ಜೊತೆಗೆ
ನಿರ್ವಹಿಸತಕ್ಕದ್ದು.
ಮೇಲಿನ ವಿಷಯಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಕೆಳಗೆ ಕೊಟ್ಟಿರುವ ಪಟ್ಟಿಯನ್ನು ಕ್ಲಿಕ್ಕಿಸಿ
1. | ಲಿಫ್ಟ್ ಅಥವಾ ಎಸ್ಕಲೇಟರ್ ಮತ್ತು ಪ್ರಯಾಣಿಕರ ಕನ್ವೆಯರ್ ತಯಾರಕರು ಮತ್ತು ಇತರ ವ್ಯಕ್ತಿಯ ನೋಂದಣಿ. | ಪ್ರೊಸಿಜರ್ ವೀಕ್ಷಿಸಿ | |
2. |
ಹೊಸ ಲಿಫ್ಟ್ ಅಥವಾ ಎಸ್ಕಲೇಟರ್ ಮತ್ತು ಪ್ರಯಾಣಿಕರ ಕನ್ವೆಯರ್ ನಿರ್ಮಿಸುವುದಕ್ಕಾಗಿ ಅನುಮತಿ. |
|
|
3. |
ಹೊಸ ಲಿಫ್ಟ್ ಅಥವಾ ಎಸ್ಕಲೇಟರ್ ಮತ್ತು ಪ್ರಯಾಣಿಕರ ಕನ್ವೆಯರ್ ಚಾಲನಾ ಪರವಾನಗಿ. |
||
4. |
ಲಿಫ್ಟ್ ಅಥವಾ ಎಸ್ಕಲೇಟರ್ ಮತ್ತು ಪ್ರಯಾಣಿಕರ ಕನ್ವೆಯರ್ ಗಳ ಅಪಘಾತಗಳ ವಿವರ. |