Menu
ಉದ್ದೇಶಗಳು

ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ವಿದ್ಯುತ್ ಸ್ಥಾವರಗಳು ಕೇಂದ್ರೀಯ ವಿದ್ಯುಚ್ಚಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಕ್ರಮಗಳು) ನಿಯಮಗಳು, 2010ರಂತೆ, ಸುರಕ್ಷತಾ ಕೋಡ್ ಮತ್ತು ಸ್ಟಾಂಡರ್ಡ್‍ಗಳಿಗೆ ಅನುಗುಣವಾಗಿರುವಂತೆ ಖಚಿತಪಡಿಸಿ ಕೊಳ್ಳುವುದು ಈ ಇಲಾಖೆಯ ಮುಖ್ಯ ಗುರಿಯಾಗಿರುತ್ತದೆ. ಮಾನವ, ಪ್ರಾಣಿ ಜೀವಕ್ಕೆ ಮತ್ತು ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ವಿದ್ಯುತ್ ಸ್ಥಾಪನೆಗಳು ಸುರಕ್ಷತೆಯಾಗಿ ಇರುವುದನ್ನು ಖಚಿತಪಡಿಸಿಕೊಳ್ಳುವುದು ಈ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ. ವಿದ್ಯುಚ್ಚಕ್ತಿಯ ಉತ್ಪಾದನೆ, ಪ್ರಸರಣಾ, ವಿತರಣೆ ಮತ್ತು ಬಳಕೆಯ ರಂಗಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳುವುದು ಈ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ.

ವಿದ್ಯುಚ್ಚಕ್ತಿ ಕಾಯಿದೆ 2003, ಕೇಂದ್ರೀಯ ವಿದ್ಯುಚ್ಚಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಕ್ರಮಗಳು) ನಿಯಮಗಳು, 2010, ಕರ್ನಾಟಕ ಲಿಫ್ಟ್, ಎಸ್ಕಲೇಟರ್‍ಗಳ ಮತ್ತು ಪ್ಯಾಸೆಂಜರ್ ಕನ್ವೆಯರ್‍ಗಳ ಕಾಯಿದೆ 2012 ಮತ್ತು ಕರ್ನಾಟಕ ಲಿಫ್ಟ್, ಎಸ್ಕಲೇಟರ್‍ಗಳ ಮತ್ತು ಪ್ಯಾಸೆಂಜರ್ ಕನ್ವೆಯರ್‍ಗಳ ನಿಯಮಗಳು 2015, ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯಿದೆ 1964 ಮತ್ತು ಕರ್ನಾಟಕ ಸಿನಿಮಾಗಳ (ನಿಯಂತ್ರಣ) ನಿಯಮಗಳು 2014, ಕರ್ನಾಟಕ ವಿಡಿಯೋ ಕ್ಯಾಸೆಟ್ ರೆಕಾರ್ಡರ್ ನಿಯಮಗಳು 1984ರಲ್ಲಿರುವಂತೆ ಪರವಾನಿಗೆ ಮತ್ತು ಪರ್ಮಿಟ್‍ಗಳನ್ನು ನೀಡಲಾಗಿರುತ್ತದೆ ಮತ್ತು ಕರ್ನಾಟಕ (ವಿದ್ಯುತ್ ಗುತ್ತಿಗೆದಾರರಿಗೆ ಪರವಾನಗಿ, ವಿಶೇಷ ತಂತಿ ರಹದಾರಿ ನೀಡುವ ಮತ್ತು ವಿದ್ಯುತ್ ಮೇಲ್ವಿಚಾರಕರು ಮತ್ತು ವಿದ್ಯುತ್ ತಂತಿ ಕೆಲಸಗಾರರಿಗೆ ಅರ್ಹತಾ ಪತ್ರ ರಹದಾರಿ ನೀಡುವಿಕೆ) ನಿಯಮಗಳು 2012 ರಲ್ಲಿರುವ ನಿಯಮಗಳ ಪ್ರಕಾರ ಸ್ಥಾವರಗಳನ್ನು ಅನುಷ್ಠಾನಕ್ಕೆ ತಂದು ಸದರಿ ಕೆಲಸವನ್ನು ಸಾಧಿಸಲಾಗುತ್ತದೆ. ಕರ್ನಾಟಕ ವಿದ್ಯುಚ್ಚಕ್ತಿ (ಬಳಕೆ ಅಥವಾ ಮಾರಾಟ ಮೇಲಣ ತೆರಿಗೆ) ಕಾಯ್ದೆ 1959 ಮತ್ತು ಅದರಡಿಯಲ್ಲಿ ರಚಿಸಲಾದಂತಹ ನಿಯಮಗಳ ಪ್ರಕಾರ ಸರಬರಾಜುದಾರರಿಂದ /ಕ್ಯಾಪ್ಟಿವ್ ಜನರೇಷನ್ ಸೇರಿದಂತೆ ಇತರರಿಂದ ಸ್ವೀಕೃತಗೊಂಡ ತೆರಿಗೆ ಪಾವತಿ ವಿವರಗಳನ್ನು ಪರಿಶೀಲಿಸುವುದು ಈ ಇಲಾಖೆಯ ಮತ್ತೊಂದು ಕೆಲಸವಾಗಿರುತ್ತದೆ.