ಮುಖ್ಯ ವಿದ್ಯುತ್ ಪರಿವೀಕ್ಷಕರು, ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಅದರ ಮುಖ್ಯ ಕಚೇರಿಯು, 2ನೇ ಮಹಡಿ, ನಿರ್ಮಾಣ ಭವನ, ಡಾ|| ರಾಜ್‍ಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ.
ಮುಖ್ಯ ವಿದ್ಯುತ್ ಪರಿವೀಕ್ಷಕರು ರಾಜ್ಯದಾದ್ಯಂತ ಪರಿವೀಕ್ಷಣಾ ವ್ಯಾಪ್ತಿ ಹೊಂದಿದ್ದು, ಆಡಳಿತ ಮತ್ತು ಕಾಯಿದೆ ಹಾಗೂ ನಿಯಮಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಖ್ಯ ವಿದ್ಯುತ್ ಪರಿವೀಕ್ಷಕರಿಗೆ, ಅಪರ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ವಿದ್ಯುತ್ ಪರಿವೀಕ್ಷಕರು, ಉಪ ವಿದ್ಯುತ್ ಪರಿವೀಕ್ಷಕರು, ಸಹಾಯಕ ವಿದ್ಯುತ್ ಪರಿವೀಕ್ಷಕರು, ಲೆಕ್ಕಾಧಿಕಾರಿ, ವ್ಯವಸ್ಥಾಪಕರು, ಅಧೀಕ್ಷಕರು ಮತ್ತು ಇತರ ಸಿಬ್ಬಂದಿಗಳು ಸಹಕರಿಸುತ್ತಿರುತ್ತಾರೆ.
ಇಲಾಖೆಗೆ ಮಂಜೂರಾಗಿರುವ ಹುದ್ದೆಗಳು, ಭರ್ತಿ ಮಾಡಲಾದ ಹುದ್ದೆಗಳು ಮತ್ತು ಖಾಲಿ ಹುದ್ದೆಗಳ ವೃಂದವಾರು ವಿವರ. (01.06.2021 ರವರೆಗೆ)
ಕ್ರಮ ಸಂಖ್ಯೆ | ಹುದ್ದೆಗಳು | ಮ೦ಜೂರಾಗಿರುವ ಹುದ್ದೆಗಳು | ಭರ್ತಿ ಮಾಡಲಾದ ಹುದ್ದೆಗಳು | ಖಾಲಿ ಹುದ್ದೆಗಳು |
---|---|---|---|---|
1 | ಮುಖ್ಯ ವಿದ್ಯುತ್ ಪರಿವೀಕ್ಷಕರು | 1 | 0 | 1 |
2 | ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರು | 7 | 7 | 0 |
3 | ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು | 15 | 14 | 1 |
4 | ವಿದ್ಯುತ್ ಪರಿವೀಕ್ಷಕರು | 25 | 23 | 2 |
5 | ಉಪ ವಿದ್ಯುತ್ ಪರಿವೀಕ್ಷಕರು | 41 | 37 | 4 |
6 | ಸಹಾಯಕ ವಿದ್ಯುತ್ ಪರಿವೀಕ್ಷಕರು | 106 | 47 | 59 |
7 | ಹಿರಿಯ ಲೆಕ್ಕಾಧಿಕಾರಿ | 1 | 0 | 1 |
8 | ಲೀಗಲ್ ಆಫೀಸರ್ (ನಿಯೋಜನೆ) | 1 | -- | 1 |
9 | ಲೆಕ್ಕಾಧಿಕಾರಿ | 7 | 0 | 7 |
10 | ವ್ಯವಸ್ಥಾಪಕರು | 8 | 4 | 4 |
11 | ಅಧೀಕ್ಷಕರು | 21 | 14 | 7 |
12 | ಪ್ರಥಮ ದರ್ಜೆ ಸಹಾಯಕರು | 51 | 30 | 21 |
13 | ಶೀಘ್ರಲಿಪಿಗಾರರು | 8 | 1 | 7 |
14 | ದ್ವಿತೀಯ ದರ್ಜೆ ಸಹಾಯಕರು | 61 | 25 | 36 |
15 | ಬೆರಳಚ್ಚುಗಾರರು | 3 | 1 | 2 |
16 | ದಫೇದಾರರು | 2 | 0 | 2 |
17 | ಹಿರಿಯ ವಾಹನ ಚಾಲಕರು | 9 | 1 | 8 |
18 | ವಾಹನ ಚಾಲಕರು | 2 | 1 | 1 |
19 | ಗ್ರೂಪ್ ‘ಡಿ’ | 46 | 9 | 37 |
ಒಟ್ಟು | 415 | 214 | 201 |